ಅಡಿಗಟ್ಟು

ಲೋಹದಿಂದ ಅಥವಾ ಮರದ ದಿಮ್ಮಿಗಳಿಂದ ಮಾಡಿರುವ ತೊಲೆಗಳು (ಕೀಲ್). ಇವನ್ನು ವಿಮಾನ, ದೋಣಿ, ಹಡಗು, ಮುಂತಾದುವುಗಳ ಕೆಳಭಾಗದಲ್ಲಿ ಉದ್ದದಲ್ಲಿ ಹಾಕಿರುತ್ತಾರೆ. ಇವು ವಿಮಾನದ ಅಥವಾ ಹಡಗಿನ ಮೇಲಿನ ಎಲ್ಲ ತೂಕಗಳನ್ನೂ ಸಮನಾಗಿ ಹೊರಬಲ್ಲುವು. ಕೇಂದ್ರೀಕೃತವಾದ ಭಾರವನ್ನು ಸಮನಾಗಿ ಹೊರಲು, ಬಾಗದಂತೆ ತಿರಿಚದಂತೆ ಇರಲು, ಅಡಿಗಟ್ಟಿನ ಗಾತ್ರವನ್ನು ಅದು ಹೊರಬಲ್ಲ ತೂಕವನ್ನು ನಿರ್ಧರಿಸಿ ಲೆಕ್ಕಾಚಾರ ಮಾಡುತ್ತಾರೆ. ನಿಜವಾಗಿ ಇವು ವಿಮಾನ ಅಥವಾ ಹಡಗಿನ ತಳಭಾಗದ ಆಧಾರಸ್ತಂಭಗಳು.									
(ಜಿ.ಟಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ